
- Shree Marikamba

- Shree Marikamba

- Shree Marikamba

- Shree Marikamba

- Shree Marikamba

- Shree Marikamba
BREAKING NEWS
-
19th February,2025
ಶ್ರೀ ದೇವಾಲಯದ ಆಡಳಿತಕ್ಕೆ ಒಳಪಟ್ಟ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ದಿನಾಂಕ : 26/02/2025 ಮಂಗಳವಾರದಂದು ಆಚರಿಸಲಾಗುವುದು. ಅಂದು ಬೆಳಿಗ್ಗೆ 6-00 ಘಂಟೆಯಿಂದ ಮಧ್ಯಾಹ್ನ 1-00 ಘಂಟೆಯವರೆಗೆ ಭಕ್ತರಿಗೆ ಅಭಿಷೇಕವನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಹಾಗೂ ದಿನಾಂಕ : 27-02-2025 ಶತರುದ್ರಾಭಿಷೇಕವನ್ನು ನಡೆಸಲಾಗುವುದು. ಹಾಗೂ ಅಂದು ಮಧ್ಯಾಹ್ನ 12-30 ಘಂಟೆಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿಸಿದೆ.
-
19th February,2025
ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ "ಸಪ್ತಪದಿ ಸರಳ ಸಾಮೂಹಿಕ ವಿವಾಹ " ವನ್ನು ಬರುವ ದಿನಾಂಕ : 16-05-2025 ರ ಶುಕ್ರವಾರ ದೇವಾಲಯದ ಸಭಾ ಮಂಟಪದಲ್ಲಿ ಬೆಳಿಗ್ಗೆ 10-30 ರ ನಂತರ ಕರ್ಕ ಲಗ್ನದ ಶುಭ ಮುಹೂರ್ತದಲ್ಲಿ ನಡೆಸಲಾಗುವುದು. ಈ ಸಂದರ್ಭದಲ್ಲಿ ವಿವಾಹವಾಗಲಿಚ್ಛಿಸುವ ವಧು ವರರು ದಿನಾಂಕ : 11-05-2025 ರ ಒಳಗೆ ದೇವಾಲಯದ ಕಛೇರಿಯಲ್ಲಿ ಹೆಸರನ್ನು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಯನ್ನು ದೇವಾಲಯದ ಕಛೇರಿಯಲ್ಲಿ ಪಡೆಯಬಹುದು . ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 08384-226360/ 200244, ಮೊಬೈಲ್ ಸಂಖ್ಯೆ : 9241149319, 9480898086, 7204945332,9741483664
ದೇವಾಲಯದ ಇತಿಹಾಸ

ಶ್ರೀ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನೆ ಪ್ರಥಮತ: ಕ್ರಿ.ಶಕ ೧೬೮೯ ರಲ್ಲಿ ಜರುಗಿತು. ಆಗ ಶಿರಸಿ ಒಂದು ಕುಗ್ರಾಮವಾಗಿತ್ತು. ಇಲ್ಲಿಯ ಒಂದು ಕೆರೆಯಲ್ಲಿ ಸಿಕ್ಕಿತೆಂದು ಹೇಳಲಾಗುವ, ಶ್ರೀ ದೇವಿಯ ಕಟ್ಟಿಗೆಯ ವಿಗ್ರಹವನ್ನು ಸ್ಥಾಪಿಸಲು ಭಕ್ತರು ಆಗ ವಿಜಯನಗರ ಸಾಮ್ರಾಜ್ಯದ ಅಂಗವಾಗಿದ್ದ ಸೋಂದಾ ರಾಜ್ಯದ ಮಹಾಪ್ರಭುಗಳಲ್ಲಿ ವಿನಂತಿಸಿದಾಗ, ಅರಸರಾದ ಶ್ರೀ ಇಮ್ಮಡಿ ಸದಾಶಿವರಾಯರು, ಶಿರಸಿಯಲ್ಲಿ ಗ್ರಾಮದೇವತೆಯಾಗಿ, ಶ್ರೀ ದೇವತೆಯನ್ನು ಪ್ರತಿಷ್ಠೆ ಮಾಡಲು ಅನುಮತಿ ನೀಡಿದರು. ನೂರಾರು ವರ್ಷಗಳವರೆಗೆ ಊರಿನ ಹಿರಿಯರೇ, ಮುಂದಾಳುಗಳಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಶ್ರೀ ದೇವಸ್ಥಾನದ ಭವ್ಯವಾದ ಚಂದ್ರಶಾಲೆ, ಗರ್ಭಗುಡಿ, ಗೋಪುರ ಮತ್ತು ಮಹಾದ್ವಾರಗಳೆಲ್ಲ ಕ್ರಿ.ಶಕ ೧೮೫೦ ರಿಂದ ೧೮೭೫ ರ ಒಳಗೆ ನಿರ್ಮಾಣವಾದವು. ಕ್ರಿ.ಶಕ ೧೯೫೫ ರಿಂದ ದೇವಸ್ಥಾನದ ಆಡಳಿತವು ೫ ಜನ ಸದಸ್ಯರುಳ್ಳ ಧರ್ಮದರ್ಶಿಗಳ ಮಂಡಳದ ಅಧಿಕಾರಕ್ಕೆ ಒಳಪಟ್ಟಿದೆ. ಉ.ಕ. ಜಿಲ್ಲಾ ನ್ಯಾಯಾಧೀಶರು ಪ್ರತಿ ೫ ವರ್ಷಗಳಿಗೊಮ್ಮೆ ಧರ್ಮದರ್ಶಿಗಳನ್ನು ನಾಮಕರಣ ಮಾಡುತ್ತಾರೆ. ಬಂಗಾಲದ ಕಾಲಿಕಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಅಂಬಾ ಭವಾನಿಯಂತೆ, ಶಿರಸಿಯ ಶ್ರೀ ಮಾರಿಕಾಂಬೆ ಕರ್ನಾಟಕದ ಅತ್ಯಂತ ಜಾಗೃತ ಶಕ್ತಿ ಪೀಠವೆನಿಸಿದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವಲ್ಲಿ ಶ್ರೀ ದೇವಿಯ ಪ್ರಸಿದ್ದಿ ಇದೆ. ಜಯಂತಿ, ನವರಾತ್ರಿ, ಕಾರ್ತಿಕೋತ್ಸವ ಹಾಗೂ ಎರಡು ವರ್ಷಗಳಿಗೊಮ್ಮೆ ಎಂಟು ದಿನಗಳ ವೈಭವ ಪೂರ್ಣ ಜಾತ್ರೆ, ಇವು ಇಲ್ಲಿ ಜರುಗುವ ಪ್ರಸಿದ್ದ ಧಾರ್ಮಿಕ ಉತ್ಸವಗಳು. ಶ್ರೀ ದೇವಿಯಲ್ಲಿ ಮಂಗಳವಾರ, ಶುಕ್ರವಾರ ಬೆಳಿಗ್ಗೆ ೭ ರಿಂದ ರಾತ್ರಿ ೧೦ ಘಂಟೆಯವರೆಗೆ, ಉಳಿದ ದಿನಗಳಲ್ಲಿ ಬೆಳಿಗ್ಗೆ ೭ ರಿಂದ ರಾತ್ರಿ ೯ ಘಂಟೆಯವರೆಗೆ ಸೇವೆಗಳು ನಡೆಯುತ್ತವೆ. ಶ್ರೀ ದೇವಾಲಯವು ಶೈಕ್ಷಣಿಕ - ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವೂ ಆಗಿದೆ. ಅದಲ್ಲದೇ ಗ್ರಂಥಾಲಯ - ವಾಚನಾಲಯಗಳಿವೆ.