Shri Marikamba Devi Fest 2018

ಶ್ರೀ ಶಾಲಿವಾಹನ ಗತಶಕೆ 1939 ನೇ ಹೇಮಲಂಬಿ ಸಂವತ್ಸರದ ಫಾಲ್ಗುಣ ಶುಕ್ಲ ದ್ವಾದಶಿಯಿಂದ  ಫಾಲ್ಗುಣ ಕೃಷ್ಣ ಷಷ್ಠಿ  ಸನ್ 2018    ನೇ ಇಸ್ವಿಯಲ್ಲಿ ನಡೆಯಲಿರುವ ಜಾತ್ರೆಯು ದಿನಾಂಕ: 27-02-2018 ರಿಂದ 07-03-2018  ರ ವರೆಗೆ ಜರುಗುತ್ತದೆ. ತಾವು ಮಾಡಬೇಕಾದ ಕೆಲಸದ ಬಗ್ಗೆ ಜಾತ್ರೆ ಕಾರ್ಯಕ್ರಮಗಳು ಈ ಕೆಳಗೆ ವಿವರಿಸಿದಂತೆ ನಡೆಯತಕ್ಕದೆಂದು ನಿರ್ಧರಿಸಲಾಗಿದೆ. ಈ ಜಾತ್ರೆಗೆ ಅನುಸರಿಸಿ ನೀವು ಜರುಗಿಸಬೇಕಾದ ಕಾರ್ಯಕ್ರಮಗಳನ್ನು ಆಯಾ ಕಾಲಕ್ಕೆ ನಿಮ್ಮ ಸಹಾಯಕರನ್ನು ಸಂಗಡ ಕರೆದುಕೊಂಡು ಬಂದು ಶ್ರೀ ದೇವಿಯ ಕೆಲಸವು ಯಶಸ್ವಿಯಾಗಿ ಸಾಂಗವಾಗಿ ನೆರವೇರುವಂತೆ ಸಹಕರಿಸಿ ಶ್ರೀ ದೇವಿಯ ಕೃಪೆಗೆ  ಪಾತ್ರರಾಗಬೇಕಾಗಿ ವಿನಂತಿ.