-
ಭೂತರಾಜ ದೇವಸ್ಥಾನ
ಈ ದೇವಸ್ಥಾನದಲ್ಲಿ ಪ್ರತಿ ನಿತ್ಯ ಮಹಾಪೂಜೆ, ಕುಂಕುಮಾರ್ಚನೆ, ಮಂಗಳಾರತಿ ಹಾಲಿನ ಅಭಿಷೇಕ ಪೂಜೆ ನಡೆಯುವುದು. ಭಕ್ತರು ತಮ್ಮ ಪ್ರಾರ್ಥನೆಯೊಂದಿಗೆ ಸುಳಗಾಯಿ ಒಡೆಯುತ್ತಾರೆ.
-
ಶ್ರೀ ತ್ರಯಂಬಕೇಶ್ವರ ದೇವಸ್ಥಾನ
ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಶಿವರಾತ್ರಿಯ ದಿನದಂದು ವಿಶೇಷ ಪೂಜೆ ನೆರವೇರಿಸಲಾಗುವುದು. ಶಿವರಾತ್ರಿಯ ಮರುದಿನದಂದು ಶತರುದ್ರಾಭಿಷೇಕ ವಿಶೇಷ ಪೂಜೆ ನಡೆಸಲಾಗುವುದು. ಪ್ರತಿ ನಿತ್ಯ ಪಂಚಾಮೃತ ಅಭಿಷೇಕ, ಮಹಾಪೂಜೆ, ವರದಂಕರಕಥೆ, ಏಕಾದಶ ರುದ್ರಾಭಿಷೇಕ ಪೂಜೆ, ರುದ್ರಾಭಿಷೇಕ,ನವಗ್ರಹಪೂಜೆ, ನವಗ್ರಹ ಶಾಂತಿ, ಮೃತ್ಯುಂಜಯ ಜಪ ಮುಂತಾದ ಪೂಜೆ ನಡೆಯುವುದು, ಶ್ರಾವಣ ಮಾಸದಲ್ಲಿ ಸೋಮವಾರ ದಿನದಂದು ವಿಶೇಷ ಅಲಂಕಾರ ಪೂಜೆ ನಡೆಯುವುದು.
-
ಶ್ರೀ ಮಹಾಗಣಪತಿ ದೇವಸ್ಥಾನ
ಈ ದೇವಸ್ಥಾನದಲ್ಲಿ ಪ್ರತಿ ತಿಂಗಳು ಬರುವ ಸಂಕಷ್ಟಿಯ ದಿನದಂದು ವಿಶೇಷ ಪೂಜೆ ನಡೆಸಲಾಗುವುದು. ಪ್ರತಿಷ್ಠಾಪನಾ ದಿನದ ನಿಮಿತ್ತ ಜೇಷ್ಠಮಾಸದ ಶುಧ್ದ ದಶಮಿಯ ದಿನದಂದು ವಾರ್ಷಿಕವಾಗಿ ಸತ್ಯಗಣಪತಿ ಕಥೆ ಪೂಜೆ ನಡೆಲಾಗುವುದು. ಗಣೇಶ ಚತುರ್ಥಿಯ ದಿನದಂದು ಗಣಹವನ ಪೂಜೆಯನ್ನು ನಡೆಸಲಾಗುವುದು.ಅಲ್ಲದೇ ಭಕ್ತರಿಗೆ ವಿಶೇಷ ಪೂಜೆಗಳಾದ ಸತ್ಯಗಣಪತಿ ಕಥೆ, ವಿನಾಯಕ ಶಾಂತಿ, ಮೋದಕ ಪೂಜೆ, ಮಹಾಪೂಜೆ, ಪಂಚಾಮೃತ ಅಭಿಷೇಕ ಪೂಜೆ ,ದೂರ್ವಾರ್ಚನೆ , ಚಂದನಾಭಿಷೇಕ , ಸಿಂಧೂರಾರ್ಚನೆ ಅಷ್ಟೋತ್ತರ ಪೂಜೆ, ಗಣಹವನ ಪೂಜೆ ನಡೆಯುವುದು.
-
ಶ್ರೀ ಸಣ್ಣ ಹನುಮಂತ ದೇವಸ್ಥಾನ
ಈ ದೇವಸ್ಥಾನದಲ್ಲಿ ರಾಮನವಮಿಯ ದಿನದಂದು ವಿಶೇಷ ಪೂಜೆ ನಡೆಸಲಾಗುವುದು ಹಾಗೂ ಶ್ರೀ ಹನುಮ ಜಯಂತಿಯ ದಿನದಂದು ಪವಮಾನ ಅಭಿಷೇಕ ಮತ್ತು ಹವನವನ್ನು ನಡೆಸಲಾಗುವುದು. ಅಲ್ಲದೇ ಪ್ರತಿ ನಿತ್ಯ ಶನಿಕಥೆ, ಶನಿ ಶಾಂತಿ, ಮಹಾಪೂಜೆ, ಪಂಚಾಮೃತ , ರುದ್ರಾಭಿಷೇಕ ಮುಂತಾದ ಪೂಜೆ ನಡೆಯುವುದು. ಶ್ರಾವಣ ಮಾಸದಲ್ಲಿ ಶನಿವಾರ ದಿನದಂದು ವಿಶೇಷ ಅಲಂಕಾರ ಪೂಜೆ ನಡೆಯುವುದು.
-
ಶ್ರೀ ಎಣ್ಣೆ ಹನುಮಂತ ದೇವಸ್ಥಾನ
ಈ ದೇವಸ್ಥಾನದಲ್ಲಿ ಭಕ್ತರೇ ನೇರವಾಗಿ ಎಣ್ಣೆ ಅಭಿಷೇಕ ಮಾಡುವುದು, ದೂಪಾರತಿ ಬೆಳಗುವುದು, ವಿಶೇಷವಾಗಿ ಶನಿವಾರ ದಿನದಂದು ಹೆಚ್ಚಿನ ಭಕ್ತರು ಪ್ರಾರ್ಥನೆಯೊಂದಿಗೆ ಎಣ್ಣೆ ಅಭಿಷೇಕ ಸೇವೆ ಸಲ್ಲಿಸುತ್ತಾರೆ.
-
ಶ್ರೀ ವಿಠೋಬ ರುಖುಮಾಯಿ ದೇವಸ್ಥಾನ
ಈ ದೇವಸ್ಥಾನದಲ್ಲಿ ಪ್ರತಿವರ್ಷವೂ ಆಷಾಢ ಏಕಾದಶಿ ದಿನದಂದು ವಿಶೇಷ ಪೂಜೆ ನೆರವೇರಿಸಲಾಗುವುದು. ಕಾರ್ತಿಕ ಏಕಾದಶಿಯ ದಿನದಂದು ವಿಶೇಷ ಪೂಜೆ ನೆರವೇರಿಸಲಾಗುವುದು. ಮತ್ತು ಕಾರ್ತಿಕ ಹುಣ್ಣಿಮೆಯ ದಿನದಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಉವುದು. ವಾರ್ಷಿಕವಾಗಿ ರಥ ಸಪ್ತಮಿಯ ದಿನದಂದು ಶ್ರೀ ಸೂಕ್ತ ಹಾಗೂ ಪುರುಷ ಸೂಕ್ತ ಹವನವನ್ನು ನಡೆಸಲಾಗುವುದು. ಅಲ್ಲದೇ ಪ್ರತಿ ನಿತ್ಯ ಸತ್ಯನಾರಾಯಣ ಕಥೆ, ಶ್ರೀಸೂಕ್ತ ಪುರುಷ ಸೂಕ್ತ, ತುಳಸಿ ಅರ್ಚನೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಮಹಾಪೂಜೆ ನಡೆಸಲಾಗುವುದು.
-
ಶ್ರೀ ಮರ್ಕಿದುರ್ಗಿ ದೇವಸ್ಥಾನ
ಈ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಮಾಘ ಶುಧ್ಧ ದ್ವಾದಶಿಯ ದಿನದಂದು ಶ್ರೀ ದುರ್ಗಾ ಶಾಂತಿ ಹವನವನ್ನು ನೆರವೇರಿಸಲಾಗುವುದು ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುವ ವಿಶೇಷ ಉತ್ಸವದ ಸಮಯಲ್ಲಿ ಶ್ರೀ ಮರ್ಕಿ ದುರ್ಗಿ ದೇವಸ್ಥಾನದಲ್ಲಿಯೂ ಕೂಡ ವಿಶೇಷ ಪೂಜೆ ನೆರವೇರಿಸಲಾಗುವುದು. ಪ್ರತಿ ನಿತ್ಯ ಮಹಾಪೂಜೆ ನಡೆಸಲಾಗುವುದು.